Thursday, 6 February 2025

ಸೂರ ಅಲ್ ಕಹ್ಫ್ # ಗುಹಾವಾಸಿಗಳು# ಮಹಿಳೆಯರಿಗೆ ಸೂರ ಅಲ್ ಕಹ್ಫ್ ಓದಬಹುದೇ#

ಸೂರತುಲ್ ಕಹ್ಫ್


ಪ್ರಶ್ನೆ -1

ಸೂರತುಲ್ ಕಹ್ಫ್ ಜಮಾ ನಮಾಝಿನ ಮೊದಲು ಓದಬೇಕೇ?

ಜುಮಾ ಮುಗಿಸಿ ಓದಿದರೆ ಆ ಪ್ರತ್ಯೇಕ ಪ್ರತಿಫಲ ಸಿಗಬಹುದೇ?

ಉತ್ತರ: ಗುರುವಾರ ಸೂರ್ಯ ಸಮಯದಿಂದ ( ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ) ಮತ್ತು ಶುಕ್ರವಾರದ ಸೂರ್ಯ ಅಸ್ತಮಿಸುವ ನಡುವೆ ಯಾವುದೇ ಸಮಯದಲ್ಲಿ ಅಲ್ ಕಹ್ಫ್ ಸೂರತನ್ನು ಓದಿದರೆ ಶುಕ್ರವಾರದಂದು ಪಠಿಸಿದ ವಿಶೇಷ ಪ್ರತ್ಯೇಕ ಪ್ರತಿಫಲವು ಸಿಗುತ್ತದೆ.

ಅಲ್ ಕಹ್ಫ್ ಪಾರಾಯಣಗೈದರೆ ಮುಂದಿನ ಜುಮಾ ತನಕ ವಿಶೇಷ ಪ್ರಕಾಶ ಅವನ ಮುಂದಿನ ಒಂದು ವಾರದ ಜೀವನದಲ್ಲಿ ನೀಡಲ್ಪಡುವುದು. ಎರಡು ಜುಮಾ ದಿನಗಳ ನಡುವಿನ ಸಣ್ಣ ಪಾಪಗಳನ್ನು ಮಣ್ಣಿಸಲ್ಪಡುವುದು, ಮತ್ತು ದಜ್ಜಾಲ್, ಕುಷ್ಟರೋಗ, ಪಾರ್ಶವಾಯು ಇನ್ನಿತರ ರೋಗಗಳಿಂದ ಪರಿಹಾರ, ಎಪ್ಪತ್ತು ಸಾವಿರ ಮಲಕ್ ಗಳಿಂದ ಪ್ರಾರ್ಥನೆ ಮೊದಲಾದವು ಶುಕ್ರವಾರ ಅಲ್ ಕಹ್ಫ್ ಸೂರತ್ ಪಠಿಸಿದವನಿಗೆ ಸಿಗಲಿರುವ ವಿಶೇಷ ಪ್ರತಿಫಲಗಳಾಗಿದೆ. 

ಆದರೂ ರಾತ್ರಿಗಿಂತ ಹಗಲು ಓದುವುದಾಗಿದೆ ಅತ್ಯುತ್ತಮ. ಹಗಲಿನಲ್ಲಿಯೂ ಸುಬ್ಹ್ ನಮಾಜಿನ ನಂತರ ಅತ್ಯುತ್ತಮವಾದ ಸಮಯ. ಸೂರ್ಯವದಿಸುವ ಮುನ್ನ ಅಸರ ನಮಾಜಿನ ಮುಂಚೆ ಎಂದು ಕೂಡ ಅಭಿಪ್ರಾಯವಿದೆ. 


ಪ್ರಶ್ನೆ -2

ಶುಕ್ರವಾರದಂದು ಮಹಿಳೆಯರು ಸೂರ ಅಲ್ ಕಹ್ಫ್ ಪಠಿಸುವುದು ಸುನ್ನತ್ತೇ?

ಉತ್ತರ: ಅಲ್ ಕಹ್ಫ್ ಓದುವುದು ಮತ್ತು ಸ್ವಲಾತ್ ಹೇಳುವುದನ್ನು ಹೆಚ್ಚಿಸುವುದು ಮಹಿಳೆಯರಿಗೂ ಪುರುಷರಂತೆ ಸುನ್ನತ್ ಆಗಿದೆ. 


ಪ್ರಶ್ನೆ-3 

ಶುಕ್ರವಾರದ ಖುತ್ಬಾವನ್ನು ಹೇಳುವವರು ಎರಡು ಖುತ್ಬಾಗಳ ನಡುವೆ ಏನನ್ನು ಪ್ರಾರ್ಥಿಸಬೇಕು? 

ಮಲಯಾಳಂ ಅಥವಾ ಕನ್ನಡದಲ್ಲಿ ಪ್ರಾರ್ಥಿಸಬಹುದೇ? 

ಜಮಾ ನಮಾಝಿನ ಮೊದಲು ಎರಡು ಖುತ್ಬಾಗಳ ನಡುವಿನ ಪ್ರಾರ್ಥನೆಯು ಬಹಳ ಪ್ರಮುಖವಾದವು. ಕೆಲವು ಪಂಡಿತರ ಅಭಿಪ್ರಾಯ ಪ್ರಕಾರ ಆ ಸಮಯದಲ್ಲಿ ಪ್ರಾರ್ಥನೆ ಮಾಡಿದ್ದಲ್ಲಿ ಉತ್ತರ ದೊರಕಲು ಬಹುತೇಕ ಸಾಧ್ಯತೆ ಹೆಚ್ಚಾಗಿದೆ. 

ಖುತ್ಬಾ ಶ್ರದ್ಧೆಯಿಂದ ಕೇಳುವವರಿಗೆ ಆ ಸಮಯದಲ್ಲಿ ಹಲಾಲಾದ ಯಾವುದೇ ಪ್ರಾರ್ಥನೆಗಳನ್ನು ಮಾಡಬಹುದು. ಮಲಯಾಳಂ ಕನ್ನಡದಲ್ಲೂ ದುವಾ ಮಾಡುವುದರಲ್ಲಿ ಅಭ್ಯಂತರವಿಲ್ಲ. 


ಪ್ರಶ್ನೆ -  4

ಅಲ್ ಕಹ್ಫ್ ಸೂರದಲ್ಲಿ ಪರಾಮರ್ಶಿಸಿದ ಗುಹೆ ವಾಸಿಗಳ ಕುರಿತು ವಿವರಣೆ ನೀಡಬಹುದೇ? 

ಉತ್ತರ:

ಪ್ರಪಂಚದಾದ್ಯಂತ ಮುಸ್ಲಿಂ ಸಮೂಹವು ಬಹಳ ಪ್ರಾಮುಖ್ಯತೆಯಿಂದ ಪಠಿಸುವ ಪರಿಶುದ್ಧ ಕುರ್ ಆನಿನ ಒಂದು ಅಧ್ಯಾಯವಾಗಿದೆ ಸೂರತುಲ್  ಕಹ್ಫ್. 

ಈ ಅಧ್ಯಾಯದಲ್ಲಿ ಅಲ್ಲಾಹನು ವಿವರಿಸಿದ ಕಥೆಯ ಮುಖ್ಯ ಪಾತ್ರಗಳಾಗಿದ್ದಾರೆ ಅಸ್ಹಾಬುಲ್ ಕಹ್ಫ್.

ಏಕದೇವತೆ ವಾದದ ಮೇಲಿನ ನಂಬಿಕೆಗಳಿಗಾಗಿ ತೀವ್ರವಾದ ಕಿರುಕುಳವನ್ನು ಎದುರಿಸಿದಾಗ ತಾಯ್ನಾಡಿನಿಂದ ಪಲಾಯನಗೈದು  ಗುಹೆ ಯಲ್ಲಿ  ಅಭಯಾರ್ತಿಗಳಾಗಿ  ಬಂದ ಯುವ ನಾಯಕರ ಕಥೆಯನ್ನಾಗಿದೆ ಪ್ರಮುಖವಾಗಿ ಈ ಅಧ್ಯಾಯದಲ್ಲಿ ವಿವರಿಸುವುದು.

ಅದಲ್ಲದೆ ಸಂಪತ್ತಿನಲ್ಲಿ ಎರಡು ವೈರುಧ್ಯ ನಿಲುವುಗಳನ್ನು ವಿವರಿಸುವ ಒಬ್ಬ ವಿಶ್ವಾಸಿ ಹಾಗೂ ಮತ್ತೊಬ್ಬ ಅವಿಶ್ವಾಸಿಯ ಕಥೆ,  ಪ್ರವಾದಿ  ಆದಂ ನಬಿ ಯಾರ(ಅ) ರವರ ಸೃಷ್ಟಿಯ ಉಲ್ಲೇಖಗಳು, ಪ್ರವಾದಿ ಮೂಸಾ ಹಾಗೂ ಖಿಳ್ರ್ ನೆಬಿಯವರ ನಡುವಿನ ಪ್ರಯಾಣ ಹಾಗೂ ಸಂಭಾಷಣೆ, ಹಾಗೂ ಇನ್ನಿತರ ಎಚ್ಚರಿಕೆಗಳು ಮತ್ತು ಸಲಹೆಗಳನ್ನು ಕೂಡಾ ಅಧ್ಯಾಯವು ವಿವರಿಸುತ್ತಿದೆ.

ಕೆಲವೊಂದು ತಫ್ಸೀರ್ ಗ್ರಂಥಗಳಲ್ಲಿ ಅಸ್ಹಾಬುಲ್ ಕಹ್ಫ್ ಅವರ ನಾಮಗಳನ್ನು ಉಲ್ಲೇಖಿಸಲ್ಪಟ್ಟಿವೆ. ಇದರ ಪ್ರಯೋಜನಗಳು ಹಾಗೂ ಫಲಿತಾಂಶಗಳನ್ನು ಪ್ರಸ್ತುತ ಗ್ರಂಥದಲ್ಲಿ ವಿವರಿಸಲಾಗಿದೆ ಅದನ್ನು ಸಂಕ್ಷಿಪ್ತವಾಗಿ ಅರ್ಥ ಮಾಡೋಣ. 

ತಫ್ಸೀರ್ ಗ್ರಂಥಗಳಲ್ಲಿ ಅವರು ಎಷ್ಟು ಜನರು ಎಂಬ ವಿಷಯದ ಬಗ್ಗೆ ಹಲವಾರು ರೀತಿಯ ಅಭಿಪ್ರಾಯ ವ್ಯತ್ಯಾಸಗಳಿವೆ, ಆದರೆ ಅವರು ಏಳು ಮಂದಿ ಆಗಿದ್ದಾರೆ ಎಂದು  ತಫ್ಸೀರ್  ರೂಹುಲ್  ಬಯಾನ್ ನಲ್ಲಿ ಕಾಣಬಹುದು. 

ಈ ಅಭಿಪ್ರಾಯವಾಗಿದೆ ಹೆಚ್ಚಿನ ಖುರಾನ್ ವ್ಯಾಖ್ಯಾನಗಾರರು ವ್ಯಕ್ತಪಡಿಸಿರುವುದು. 

ಹಾಗೂ ಮತ್ತೊಂದು ತಫ್ಸೀರ್  ಗ್ರಂಥವಾದ ತಫ್ಸೀರ್ ತ್ವಬ್ರಿ ಯಲ್ಲಿ ಅವರು ಎಂಟು ಮಂದಿ ಇರುವುದಾಗಿ ವ್ಯಕ್ತಪಡಿಸಿದ್ದಾರೆ ಹಾಗೂ ಈ ಎಂಟು ಮಂದಿಯ ಹೆಸರುಗಳನ್ನು ತ್ವಬ್ರಿ ಇಮಾಮರು ಉಲ್ಲೇಖಿಸಿದ್ದಾರೆ. 

1مكسلمينا،

 2 محسيميلنينا،

 3 يمليخا،

 4 مرطوس،

 5 كشوطوش،

 6 بيرونس،

 7 دينموس،

 8. بطو نسقالوس


ರೂಹುಲ್ ಬಯಾನ್ ನಲ್ಲಿ ಏಳು ಮಂದಿಯ ಹೆಸರುಗಳನ್ನು ಅಲಿ (ರ) ರವರಿಂದ  ವರದಿಯಾಗಿರುವುದನ್ನು ಕಾಣಬಹುದು. 

1 يمليخا،
 2 مكشليينا،
 3 مشليينا،
 4 مرنوش،
 5 دبرنوش،
 6 شازنوش،
 7(كفشططيوش / كفيشيططيوش)

ಈ ಹೆಸರುಗಳನ್ನು ಬರೆದು ಉಪಯೋಗಿಸಿದರೆ ಅನೇಕ ಪ್ರಯೋಜನೆಗಳು ದೊರಕುತ್ತದೆ ಎಂದು ತಫ್ಸೀರ್  ರೂಹುಲ್ ಬಯಾನ್ ನಲ್ಲಿ ಹೇಳಲಾಗಿದೆ. ಸಂಕ್ಷಿಪ್ತ ರೂಪವನ್ನು ನಮಗೆ ತಿಳಿಯೋಣ. 

ಅಸ್ಹಾಬುಲ್ ಕಹ್ಫ್  ರವರ  ಹೆಸರುಗಳು ತಮ್ಮ ಎಲ್ಲಾ ಅಗತ್ಯಗಳನ್ನು ನೆರವೇರಿಸಲು, ಮೋಕ್ಷವನ್ನು ಸಾಧಿಸಲು, ಬೆಂಕಿಯನ್ನು ನಿಂದಿಸಲು, ಮಕ್ಕಳು ಕೂಗುವುದನ್ನು ಶಾಂತಗೊಳಿಸಲು, ಕೃಷಿ ಸಮೃದ್ಧಿಯನ್ನು ಉತ್ತೇಜಿಸಲು, ಸುರಕ್ಷಿತ Scholarship ಖಚಿತಪಡಿಸಿಕೊಳ್ಳಲು, ಸಂಪತ್ತನ್ನು ಸಂರಕ್ಷಿಸಲು, ಹಾಗೂ ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಮಾರ್ಗವಾಗಿದೆ. 

ಬೆಂಕಿ ಹೊತ್ತಿಕೊಂಡರೆ ಅಸ್ಹಾಬುಲ್ ಕಹ್ಫ್  ರವರ ಹೆಸರುಗಳನ್ನು ಬಟ್ಟೆಯ ಮೇಲೆ ಬರೆದು ಬೆಂಕಿಯ ಮಧ್ಯದಲ್ಲಿ ಎಸೆಯಿರಿ,  ಅಳುವ ಮಕ್ಕಳಿಗಾಗಿ ಈ ಹೆಸರುಗಳನ್ನು ಬರೆದು ಕಾಗದದ ತುಂಡನ್ನು ಮಗುವಿನ ತಲೆಯ ಕೆಳಗೆ ತೊಟ್ಟಿಲಲ್ಲಿ ಇರಿಸಿ, ಕೃಷಿ ಸಮೃದ್ಧಿಗಾಗಿ ಹೊಲದ ಮಧ್ಯದಲ್ಲಿರುವ ಮರದ ಕೊಂಬೆಯ ಮೇಲೆ  ಈ ತಿಳಿಸಿದ ಹೆಸರುಗಳಿರುವ ಕಾಗದದ ತುಂಡನ್ನು ಇಡಿ.  

(ತಫ್ಸೀರ್ ರೂಹುಲ್ ಬಯಾನ್)



No comments:

Post a Comment